ಅಂತರ್ರಾಷ್ಟ
(international)
Ne quis mediocrem sit, dolor reprimique nec id, quo no scaevola vituperata.
ಪ್ರಧಾನಿ ನರೇಂದ್ರ ಮೋದಿ ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಎರಡು ದೇಶಗಳ ನಡುವಿನ ಕೆಲವು ಭದ್ರತಾ ಒಪ್ಪಂದಗಳಿಗೆ ಸಹಿ ಮಾಡಿದರು. ಈ ವೇಳೆ ಮಹಾಸಾಗರ್ ಯೋಜನೆಯನ್ನು ಘೋಷಿಸಿದರು. ಈ ಎರಡು ದೇಶಗಳಿಗೆ ವ್ಯಾಪಾರ ಮತ್ತು ಭದ್ರತೆಗೆ ಹಿಂದೂ ಮಹಾಸಾಗರ ಮುಖ್ಯವಾಗಿರುವುದರಿಂದ ಮಹಾಸಾಗರ್ ಯೋಜನೆ ಅಗತ್ಯವಾಗಿದೆ.
Prime Minister Narendra Modi, while attending the National Day celebrations of Mauritius as the chief guest, signed some security agreements between the two countries. During this, he announced the Mahasagar project. The Mahasagar project is necessary because the Indian Ocean is important for trade and security for these two countries.
ಬಾನಂಗಳಕ್ಕೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ ಅವರನ್ನು ಹೊತ್ತೊಯ್ದಿದ್ದ ‘ಸ್ಟಾರ್ ಲೈನರ್’ ತಾಂತ್ರಿಕ ದೋಷದಿಂದ ಯಾತ್ರಿಗಳು ಹಿಂತಿರುಗಲು ಸಾಧ್ಯವಾಗಿರಲಿಲ್ಲ. 9 ತಿಂಗಳುಗಳ ಈ ಇಬ್ಬರು ಸಾಧಕರು ಸದ್ಯದಲ್ಲೇ ಭೂಮಿಗೆ ಬರಲಿದ್ದಾರೆ ಎಂದು ನಾಸಾ ಮಾಹಿತಿ ನೀಡಿದೆ. ಹೊಸ ತಂಡವು ಕ್ರೂ – 10 ಕಾರ್ಯಚರಣೆಯ ಮೇರೆಗೆ ಅಂತರಾಷ್ಟ್ರೀಯ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಅವರೊಂದಿಗೆ ಸುನಿತಾ ಮತ್ತು ಬುಚ್ ಮರಳಲ್ಲಿದ್ದಾರೆ.
The Starliner carrying Sunita Williams and Butch Wilmore to the moon failed to return due to a technical glitch. NASA has announced that the two astronauts, who spent nine months on the moon, will soon return to Earth. The new crew will be flying to the International Space Station as part of the Crew-10 mission, with Sunita and Butch still on board.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಪೌರತ್ವ ಪಡೆಯಲು ಶ್ರೀಮಂತ ವಿದೇಶಿ ವಲಸಿಗರಿಗೆ ಗೋಲ್ಡ್ ಕಾರ್ಡ್ ಘೋಷಿಸಿದ್ದಾರೆ. ಇದು ಪೂರ್ವದಲ್ಲಿದ್ದ ಗ್ರೀನ್ ಕಾರ್ಡ ಮುಂದುವರೆದ ಭಾಗವಾಗಿದ್ದರು, ಅದಕ್ಕಿಂತ ತ್ವರಿತವಾಗಿ ದೇಶದ ಪೌರತ್ವವನ್ನು ಒದಗಿಸುತ್ತದೆ. ಗೋಲ್ಡ್ ಕಾರ್ಡ್ ಪಡೆಯಲು 5 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 43 ಕೋಟಿ 55 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.
US President Donald Trump has announced a Gold Card for wealthy foreign immigrants to obtain US citizenship. This is an extension of the Green Card that was previously in place, and provides faster citizenship to the country. The Gold Card has been set at 5 million US dollars, which is about 43 crore 55 lakh rupees.
ಸದ್ಯ ಅಮೇರಿಕಾದಲ್ಲಿ ಪ್ರತಿ ಗಂಟೆಗೆ 265km ವೇಗದಲ್ಲಿ ಬೀಸುತ್ತಿರುವ ಸುಂಟರಗಾಳಿಯಿಂದ ಧೂಳಿನ ಬಿರುಗಾಳಿ ಹಾಗೂ ಕಾಡಿಗಿಚ್ಚು ಸೇರಿದಂತೆ 50ಕ್ಕೂ ಹೆಚ್ಚು ಹವಾಮಾನ ವೈಪರಿತ್ಯ ಉಂಟಾಗಿವೆ. ಪ್ರಸ್ತುತ ಒಂಬತ್ತು ರಾಜ್ಯಗಳಲ್ಲಿ ಸುಮಾರು 37 ಜನರು ಜೀವ ಕಳೆದುಕೊಂಡಿದ್ದು, ಅಪಾರ ಆಸ್ತಿ ನಷ್ಟವಾಗಿದೆ. ವಾಯುಮಂಡಲದಲ್ಲಿ ಒಮ್ಮೆಲೇ ಶೀತಗಾಳಿ ಮತ್ತು ಒಣಗಾಳಿ ಸಂಧಿಸಿ ಚಂಡಮಾರುತ ಎದ್ದಿರುವುದು ಅಮೇರಿಕಾದ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿದೆ.
Currently, a tornado with winds of up to 265 km per hour has caused more than 50 weather disasters, including dust storms and wildfires, in the United States. At least 37 people have lost their lives and there has been a huge loss of property in nine states. The storm is caused by the simultaneous combination of cold air and dry air in the atmosphere.
ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ನೂರಾರು ರೂಪಗಳನ್ನು ಹೊಂದಿದೆ. 18ನೇ ಶತಮಾನದಲ್ಲಿ ಇದೊಂದು ಗಂಭೀರ ಕಾಯಿಲೆ ಎಂದು ಗುರುತಿಸಲ್ಪಟ್ಟರು, ಇಂದಿನವರೆಗೂ ಸಂಪೂರ್ಣವಾಗಿ ಕ್ಯಾನ್ಸರ್ ಕೊನೆಗಾಣಿಸಲು ಯಾವುದೇ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಇತ್ತೀಚಿಗೆ ರಷ್ಯಾ ಮೆಸೆಂಜರ್ ರೈಬೋನ್ಯೂಕ್ಲಿಯಿಕ್ ಆಮ್ಲ ತಂತ್ರಜ್ಞಾನವನ್ನು ಬಳಸಿ ಹೊಸ ಲಸಿಕೆ ಕಂಡುಹಿಡಿದಿದೆ. ಇದು ಕ್ಯಾನ್ಸರ್ ಕರಾಳತೆಯನ್ನು ಅಂತ್ಯಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆ ಇದೆ.
Cancer, a deadly disease, has hundreds of forms. It was recognized as a serious disease in the 18th century, and until now, no cure has been found to completely eliminate cancer. But recently, Russia has discovered a new vaccine using messenger ribonucleic acid technology. This is likely to be a significant milestone in ending the cancer scourge.