ನಾವೀನ್ಯತೆ( Innovative)
Ne quis mediocrem sit, dolor reprimique nec id, quo no scaevola vituperata.
ಸರ್ಚ್ ಇಂಜಿನ್ಗಳ ಪೈಕಿ ಅಗಾಧ ಪ್ರಭಾವ ಬೀರುವ ಅಮೆರಿಕ ಮೂಲದ ಗೂಗಲ್, ಭಾರತದಲ್ಲಿ ಬೃಹತ್ ಕ್ಯಾಂಪಸ್ ಸ್ಥಾಪಿಸಿದೆ. ಬೆಂಗಳೂರಿನ ಮಹದೇವಪುರದಲ್ಲಿನ ಅನಂತ ಎಂಬ ಹೆಸರಿನ ಗೂಗಲ್ ಕಚೇರಿಯಲ್ಲಿ 5,000 ಉದ್ಯೋಗಿಗಳು ಕೆಲಸ ಮಾಡಬಹುದಾಗಿದೆ. ಸಂಸ್ಥೆಗೆ ಸಂಬಂಧಿಸಿದ ಗೂಗಲ್ ಸರ್ಚ್ ,ಮ್ಯಾಪ್, ಗೂಗಲ್ ಪ್ಲೇ ಆಂಡ್ರಾಯ್ಡ್ ,ಎ ಐ ಮುಂತಾದ ಕಾರ್ಯವಹಿವಾಟು ಇಲ್ಲಿ ನಡೆಯುತ್ತವೆ. ಪರಿಸರ ಸ್ನೇಹಿ ಕ್ಯಾಂಪಸ್ ಹೆಚ್ಚು ಆಕರ್ಷಕವಾಗಿದ್ದು, ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.
Google, the US-based search engine giant, has set up a huge campus in India. The Google office named Anantha in Mahadevapura, Bengaluru, can accommodate 5,000 employees. The company’s operations such as Google Search, Maps, Google Play Android, AI, etc. are carried out here. The eco-friendly campus is very attractive and has many facilities.
ದೇಶದ ತಂಪು ಪಾನೀಯ ಮಾಧ್ಯಮ 4.6 ಬಿಲಿಯನ್ ಡಾಲರ್ಸ್ ಗಳಾಗಿದ್ದು, ಇಂತಹ ದೈತ್ಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಅನೇಕ ಕಂಪನಿಗಳಿವೆ. ಆದರೆ ಎರಡು ದಶಕಗಳ ನಂತರ ಮತ್ತೆ ಕ್ಯಾಂಪಾ ಕೋಲಾ ರಿಲಯನ್ಸ್ ಇಂಡಸ್ಟ್ರೀಸ್ ಅಡಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಅಗ್ಗದ ದರವು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಹಲವಾರು ಬೃಹತ್ ತಂಪು ಪಾನೀಯಗಳ ಕಂಪನಿಗೆ ಕ್ಯಾಂಪಾ ಕೋಲಾ ಇದೀಗ ಉತ್ತಮ ಪೈಪೋಟಿ ನೀಡುತ್ತಿದೆ.
The country’s soft drink industry is worth $4.6 billion, and there are many companies competing in such a giant market. But after two decades, Campa Cola has re-entered the market under Reliance Industries. Its cheap price has attracted consumers, and Campa Cola is now giving good competition to several large soft drink companies.
ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ನೂರಾರು ರೂಪಗಳನ್ನು ಹೊಂದಿದೆ. 18ನೇ ಶತಮಾನದಲ್ಲಿ ಇದೊಂದು ಗಂಭೀರ ಕಾಯಿಲೆ ಎಂದು ಗುರುತಿಸಲ್ಪಟ್ಟರು, ಇಂದಿನವರೆಗೂ ಸಂಪೂರ್ಣವಾಗಿ ಕ್ಯಾನ್ಸರ್ ಕೊನೆಗಾಣಿಸಲು ಯಾವುದೇ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಇತ್ತೀಚಿಗೆ ರಷ್ಯಾ ಮೆಸೆಂಜರ್ ರೈಬೋನ್ಯೂಕ್ಲಿಯಿಕ್ ಆಮ್ಲ ತಂತ್ರಜ್ಞಾನವನ್ನು ಬಳಸಿ ಹೊಸ ಲಸಿಕೆ ಕಂಡುಹಿಡಿದಿದೆ. ಇದು ಕ್ಯಾನ್ಸರ್ ಕರಾಳತೆಯನ್ನು ಅಂತ್ಯಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆ ಇದೆ.
Cancer, a deadly disease, has hundreds of forms. It was recognized as a serious disease in the 18th century, and until now, no cure has been found to completely eliminate cancer. But recently, Russia has discovered a new vaccine using messenger ribonucleic acid technology. This is likely to be a significant milestone in ending the cancer scourge.
ಅಮೆರಿಕದಂತಹ ಬಲಿಷ್ಠ ರಾಷ್ಟ್ರದ ಸ್ಟಾಕ್ ಮಾರ್ಕೆಟ್ ತಲೆಕೆಳಗಾಗಿಸಿ ಡೀಪ್ಸೀಕ್, ಜಗತ್ತೆ ಚೀನಾ ದತ್ತ ತಿರುಗಿ ನೋಡುವಂತೆ ಮಾಡಿದೆ. ಯಾರಿಗೂ ಬೇಡವಾದ ಚಿಪ್ ಬಳಸಿ ಚೀನಾ ಅತ್ಯಂತ ಶಕ್ತಿಶಾಲಿ ಎಐ ಸೃಷ್ಟಿಸಿದೆ. ಡೀಪ್ಸೀಕ್ ನಿಂದ ವಿಶ್ವದ ದೈತ್ಯ ಕಂಪನಿಗಳಿಗೆ ಅಪಾರ ನಷ್ಟ ಉಂಟಾಗಿದೆ.
DeepSeek has turned the stock market of a powerful country like America upside down and made the world look to China. China has created the most powerful AI using a chip that no one wants. DeepSeek has caused huge losses to the world’s giant companies.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಭಾರತದ ಮೊಟ್ಟ ಮೊದಲ ಹೈಸ್ಪೀಡ್ ರೈಲು ನಿರ್ಮಾಣವಾಗುತ್ತಿದೆ. ಪ್ರತಿ ಗಂಟೆಗೆ ಇದರ ವೇಗ 280 ಕಿಮೀ ಆಗಿದೆ. ಬುಲೆಟ್ ರೈಲು 2026 ರಲ್ಲಿ ತನ್ನ ಮೊದಲ ಸಂಚಾರ ಆರಂಭಿಸುವ ಗುರಿ ಹೊಂದಿದ್ದು, ಅದಕ್ಕಾಗಿ ಇತ್ತೀಚಿಗೆ ಈ ರೈಲು ಮಾರ್ಗದ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.
India’s first high-speed train is being built under the Make in India program. Its speed is 280 km per hour. The bullet train is targeted to start its first run in 2026, and for this, the work on this railway line is progressing rapidly recently.
ಗುಜರಾತ್ನ ಜಾಮ್ನಗರದಲ್ಲಿ ಅನಂತ್ ಅಂಬಾನಿ ನೇತೃತ್ವದಲ್ಲಿ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿಯ ‘ವಂತಾರ’ ಕೇಂದ್ರ ನಿರ್ಮಿಸಲಾಗಿದೆ. ಇದು ಸುಧಾರಿತ ವೈದ್ಯಕೀಯ ಆರೈಕೆ, ಸಂಶೋಧನಾ ಸೌಲಭ್ಯಗಳು ಮತ್ತು ಪ್ರಾಣಿಗಳಿಗೆ ವಿಶಾಲವಾದ ಅಭಯಾರಣ್ಯವನ್ನು ಒಳಗೊಂಡಿದೆ. 2,000ಕ್ಕೂ ಹೆಚ್ಚು ಜಾತಿಯ ಹಾಗು 1.5 ಲಕ್ಷಕ್ಕೂ ಅಧಿಕ ಸಂರಕ್ಷಿಸಲ್ಪಟ್ಟ ಹಾಗೂ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳನ್ನು ವಂತಾರದಲ್ಲಿ ಕಾಣಬಹುದು.
Anant Ambani has built the Vantara Centre for Animal Rescue and Rehabilitation in Jamnagar, Gujarat. It has advanced medical care, research facilities and a vast sanctuary for animals. More than 2,000 species and over 1.5 lakh protected and endangered animals can be found at Vantara.
ಭಾರತದ ಟೆಲಿಕಾಂ ಪಿತಾಮಹ ಎಂದು ಕರೆಸಿಕೊಳ್ಳುವ ಬಿಎಸ್ಎನ್ಎಲ್ ದಶಕಗಳ ಹಿಂದೆ ಖಾಸಗಿ ಕಂಪನಿಗಳ ಪೈಪೋಟಿಯಿಂದ ಕಣ್ಮರೆಯಾಗಿತ್ತು. 17 ವರ್ಷಗಳ ಬಳಿಕ ಇದೀಗ 4ಜಿ ರೂಪತಾಳಿ ಮತ್ತೆ ಮುಂಚುಣಿಗೆ ಬಂದಿದೆ. ನೂತನ ಸೇವೆ, ಯೋಜನೆ, ತಂತ್ರಜ್ಞಾನ, ಟವರ್, ಅಗ್ಗದ ಕರೆನ್ಸಿ ಪ್ಲಾನ್ ಒಳಗೊಂಡಿರುವ ಬಿಎಸ್ಎನ್ಎಲ್ ಗೆ 2% ಗಿಂತ ಹೆಚ್ಚು ಚಂದದಾರರು ಉಳಿದ ಸಿಮ್ ಗಳಿಂದ ಪೋರ್ಟ್ ಆಗುತ್ತಿದ್ದಾರೆ.
BSNL, which is called the father of Indian telecom, disappeared decades ago due to competition from private companies. Now, after 17 years, the 4G format has come back to the forefront. More than 2% of subscribers are being ported from other SIMs to BSNL, which includes new services, plans, technology, towers, and cheap currency plans.
ಸ್ವಚಾಲಿತ ಕಾರುಗಳಿಂದ ಹೆಸರುವಾಸಿಯಾದ ಟೆಸ್ಲಾ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ದೇಶದ ಇವಿ ಕಾರುಗಳ ಬೃಹತ್ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿಯು ಮತ್ತಷ್ಟು ಸಾಮರ್ಥ್ಯ ನೀಡುತ್ತದೆ. ಜೊತೆಗೆ ಇದರ ನೂತನ ವಿನ್ಯಾಸ, ಉತ್ತಮ ಬ್ಯಾಟರಿ, ತಂತ್ರಜ್ಞಾನ, ಕಡಿಮೆ ಬೆಲೆ ಎಲ್ಲವೂ ಇತರ ಎಲೆಕ್ಟ್ರಿಕ್ ವಾಹನಗಳ ನಡುವೆ ಅಧಿಕ ಪೈಪೋಟಿಯನ್ನು ಸೃಷ್ಟಿಸಲಿದೆ.
Tesla, known for its self-driving cars, is all set to enter India. Tesla’s entry will further strengthen the country’s huge EV market. Its new design, better battery, technology, and lower price will all create greater competition among other electric vehicles.
ಸ್ವಚಾಲಿತ ಕಾರುಗಳಿಂದ ಹೆಸರುವಾಸಿಯಾದ ಟೆಸ್ಲಾ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ದೇಶದ ಇವಿ ಕಾರುಗಳ ಬೃಹತ್ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿಯು ಮತ್ತಷ್ಟು ಸಾಮರ್ಥ್ಯ ನೀಡುತ್ತದೆ. ಜೊತೆಗೆ ಇದರ ನೂತನ ವಿನ್ಯಾಸ, ಉತ್ತಮ ಬ್ಯಾಟರಿ, ತಂತ್ರಜ್ಞಾನ, ಕಡಿಮೆ ಬೆಲೆ ಎಲ್ಲವೂ ಇತರ ಎಲೆಕ್ಟ್ರಿಕ್ ವಾಹನಗಳ ನಡುವೆ ಅಧಿಕ ಪೈಪೋಟಿಯನ್ನು ಸೃಷ್ಟಿಸಲಿದೆ.
Tesla, known for its self-driving cars, is all set to enter India. Tesla’s entry will further strengthen the country’s huge EV market. Its new design, better battery, technology, and lower price will all create greater competition among other electric vehicles.
ಶ್ರೀ ಕೃಷ್ಣರ ಕರ್ಮ ಭೂಮಿ ಎಂದು ಹೇಳಲು ಪಡುವ ದ್ವಾರಕಾ ನಗರದ ಅನ್ವೇಷಣೆಗೆ ಮತ್ತೆ ಪುರಾತತ್ವ ಇಲಾಖೆ ಮುಂದಾಗಿದೆ. ಗುಜರಾತಿನ ಕಡಲಲ್ಲಿ ದೊರೆತ ಅನೇಕ ಸಾಕ್ಷಿ ಆಧಾರಗಳ ಮೇಲೆ ಅರಬ್ಬಿ ಸಮುದ್ರದ ಗರ್ಭ ಸೇರಿರುವ ಶ್ರೀ ಕೃಷ್ಣ ನಗರಿ ಹುಡುಕಲು 5 ಪುರಾತತ್ವಜ್ಞರು ಆಳ ಸಮುದ್ರ ಸೇರಿದ್ದಾರೆ. ಭಾರತ ಸರ್ಕಾರದ ಈ ಐತಿಹಾಸಿಕ ಹೆಜ್ಜೆ ದೇಶದ ಶ್ರೀಮಂತ ಪರಂಪರೆಗೆ ಮೈಲಿಗಲ್ಲಾಗಲಿದೆ.
The Archaeological Survey of India (ASI) has once again embarked on the search for the city of Dwarka, which is said to be the Karma Bhoomi of Lord Krishna.
Based on the evidence found in the seas of Gujarat, 5 archaeologists have entered the deep sea to search for the city of Sri Krishna, which is located in the womb of the Arabian Sea. This historic step by the Government of India will be a milestone in the rich heritage of the country.
ರಾಜ್ಯದಲ್ಲಿ ಸಾಂಪ್ರದಾಯಿಕ ಚಿನ್ನ ಗಣಿಗಾರಿಕೆಯ ಹೊರತಾಗಿ ಬೇರೆ ಆರು ರಾಜ್ಯಗಳಲ್ಲಿ ಖನಿಜ ಶೋಧನೆ ಆರಂಭವಾಗಿದೆ. ಚಿನ್ನದೊಂದಿಗೆ ತಾಮ್ರ, ನಿಕಲ್, ಅಲ್ಯೂಮಿನಿಯಂ, ಪ್ಲಾಟಿನಮ್ ಎಂದ ವಿವಿಧ ಮೆಟಲ್ ಗಳು ದೊರೆಯುತ್ತಿವೆ. ಕೇಂದ್ರ ಸರ್ಕಾರದಿಂದ ಅಧಿಸೂಚನೆಗೊಂಡ ಅನ್ವೇಷಣಾ ಸಂಸ್ಥೆಗಳು ಮತ್ತು ಖಾಸಗಿ ಅನ್ವೇಷಣಾ ಸಂಸ್ಥೆಗಳು ಚಿನ್ನ ಶೋಧ ಕಾರ್ಯಚರಣೆ ಕೈಗೊಂಡಿವೆ.
Apart from traditional gold mining in the state, mineral exploration has started in six other states. Along with gold, various metals like copper, nickel, aluminum, platinum are being found. Exploration companies notified by the central government and private exploration companies have undertaken gold exploration operations.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಕ್ಷಿಣ ರಾಜ್ಯಗಳಲ್ಲಿ ಮೊದಲ ಬಾರಿ ಎಕ್ಸ್ಪ್ರೆಸ್ವೇ ಅಭಿವೃದ್ಧಿಪಡಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ. 258 ಕಿಮೀ ಉದ್ದದ ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇಯಲ್ಲಿ ಕರ್ನಾಟಕ ಭಾಗದ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ತಾತ್ಕಾಲಿಕವಾಗಿ ಶುಲ್ಕವಿಲ್ಲದೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
The National Highways Authority of India has developed the first expressway in the southern states. It connects the states of Karnataka, Tamil Nadu, and Andhra Pradesh. The 258-km-long Bangalore-Chennai Expressway has been temporarily toll-free following the completion of the Karnataka portion of the highway.